ಇಲ್ಲಿರುವ ಪುಸ್ತಕಗಳ ಸಂಗ್ರಹವು ಮನೋವೈಜ್ಞಾನಿಕ ಚಿಂತನೆಗಳ ಬಗ್ಗೆ ಆಗಿರುತ್ತವೆ. ಮನೋವಿಜ್ಞಾನದ ಪದಕೋಶದಿಂದ ಹಿಡಿದು ಮಿಕ್ಕೆಲ್ಲಾ ಪುಸ್ತಕಗಳು ಮಾನಸಿಕ ಚಟುವಟಿಗಳ ಬಗ್ಗೆಯೇ ಆಗಿರುವದು. ಪದಕೋಶದಲ್ಲಿ ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ವಿವರಣೆ ನೀಡಲಾಗಿರುತ್ತದೆ. ಇವುಗಳು ಸಾಮಾನ್ಯರಿಗೂ ಮನೋವಿಜ್ಞಾನದ ಪದಗಳು ಯಾವ ಮಾನಸಿಕ ಸ್ಥಿತಿಯನ್ನು ವಿವರಿಸಲಾಗಿದೆ ಎನ್ನುವದನ್ನು ತಿಳಿಪಡಿಸುತ್ತದೆ. ಇಂತಹದೊಂದು ಅರಿವಿನಿಂದಾಗಿ ನಮ್ಮ ಮನಸಿಗೆ ಬರುವ ಸಮಸ್ಯೆಗಳನ್ನು ವಿಮರ್ಶಿಸುವದು ಸುಲಭವಾಗುವುದಲ್ಲದೆ ವಿನಾಕಾರಣ ಆತಂಕ, ಭಯ, ತಪ್ಪ ಕಲ್ಪನೆಗಳಿಂದ ದೂರವಿರುವದಕ್ಕೆ ಸಾಧ್ಯವಾಗುತ್ತದೆ. ವಿವೇಚನೆ ಹೆಚ್ಚುತ್ತದೆ , ವಿಚಾರ ಮಾಡುವ ಬಲ ಗಟ್ಟಿಯಾಗಿ ನಿಲ್ಲುತ್ತದೆ. ಈ ಮೂಲಕ ನಿಮ್ಮ ಮನೋಬಲಗಳು ಹೆಚ್ಚಿದಷ್ಟು ಸಮಸ್ಯೆಗಳಿಂದ ಪರಿಹಾರ ಪಡೆಯುವದು, ಮಾನಸಿಕವಾಗಿ ಸದೃಢತೆಯನ್ನು ಪಡೆಯುವದು ಸುಲಭವಾಗುತ್ತದೆ. ಇನ್ನೊಂದು ಮುಖ್ಯವಿಷಯವೆಂದರೆ ಇಲ್ಲಿರುವ ಅನೇಕ ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗಲಾರದು. ಆದುದರಿಂದ ಅವುಗಳನ್ನು ಪಾಡ್ಕಾಸ್ಟ್ ಮೂಲಕ ಓದುಗರು, ಕೇಳುಗರಿಗೆ ಕ್ರಮೇಣ ಸಿಗುವಂತೆ ಮಾಡಲಾಗುತ್ತಿದೆ. ಇದಲ್ಲದೆಯೇ ದಿನನಿತ್ಯದ ಮಾನಸಿಕತೆಯ ಬಗ್ಗೆಯೂ ಮಾಹಿತಿಗಳು ಇಷ್ಟರಲ್ಲಿಯೇ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಸ್ವ-ದರ್ಶನ ಎನ್ನುವ ಪ್ರಾಕ್ಟಿಸ್ ಮೂಲಕ ನಿಮ್ಮ ಮನೋಬಲ ಹೆಚ್ಚಿಸಿಕೊಂಡು ಪರಿಪೂರ್ಣ ಹಿತವನ್ನು ಅನುಭವಿಸಲು ಸಾಧ್ಯ . ಇದಕ್ಕೆ ಸಂಬಂಧಿಸಿದ ತರಬೇತಿ ಕಾರ್ಯಾಗಾರ, ವೆಬಿನಾರ್ ಮತ್ತು ಮುಖಾಮುಖಿ ಸಂದರ್ಶನಗಳಿಗೂ ಆವಕಾಶವಿದೆ. ಮೇಲ್ಕಂಡ ಪುಸ್ತಕಗಳ ಆಡಿಯೋ, ಪಾಡ್ಕಾಸ್ಟು ಇಷ್ಟರಲ್ಲಿಯೇ ಲಭ್ಯ.
ಮನೋವಿಜ್ಞಾನದ ಪದಕೋಶದಲ್ಲಿ ಏನೆಲ್ಲಾ ವಿವರಣೆಗಳು ಸಿಗುತ್ತವೆ ಎನ್ನುವದರ ಉದಾಹರಣೆಗಳು ಇಲ್ಲವೆ: .
Example :Intelligence ; ಬುದ್ಧಿಶಕ್ತಿ. ಇದು ಮನುಷ್ಯರ ಮಾನಸಿಕ ಸ್ಥಿತಿಗಳಲ್ಲಿ ಒಂದು, ಇದರ ಮೂಲಕ ಹೊರಜಗತ್ತಿನೊಂದಿಗೆ ಹೊಂದಿಕೊಳ್ಳುವದನ್ನು ಕಲಿಯುವದಕ್ಕೆ ಸಾಧ್ಯ. ಹೆಚ್ಚಾಗಿ ಇದು ಎಲ್ಲರಲ್ಲಿಯೂ ಒಂದಿಷ್ಟು ಪ್ರಮಾಣದಲ್ಲಿ ಇದ್ದೇ ಇರುವದು. ಶೂನ್ಯ ಬುದ್ಧಿ ಶಕ್ತಿ ಎನ್ನುವದು ನಿಜವಲ್ಲ. ಆದರೆ ಕೆಲವರಲ್ಲಿ ಅತಿಯಾದ ಬುದ್ಧಿ ಸಾಮರ್ಥ್ಯ ಇರಬಲ್ಲದು. ಅಂಕಿಅಂಶಗಳ ಪ್ರಕಾರ ಒಂದು ಜನಸಂಖ್ಯೆಯಲ್ಲಿ, ಅಂದರೆ, ಪಾಪ್ಯುಲೇಷನ್ನಿನಲ್ಲಿರುವ ಹೆಚ್ಚಿನ ಜನರು ಸರಾಸರಿ ಮಧ್ಯದ ಸ್ಥಿತಿಯಲ್ಲಿ ಇರುತ್ತಾರೆ ಅಂದ್ರೆ ಅತಿಯಾದ ಬುದ್ಧಿಶಕ್ತಿ, ಮತ್ತು ತೀರಾ ಕಡಿಮೆ ಬುದ್ಧಿಶಕ್ತಿ ಇರುವವರಿಬ್ರು ಕಡಿಮೆ ಪ್ರಮಾಣದಲ್ಲಿ ಇರುತ್ತಾರೆ .
example :Artificial Intelligence:- ಕೃತಕ ಬುದ್ಧಿಶಕ್ತಿ ಅಥವಾ ಸಾಮರ್ಥ್ಯ. ಯಂತ್ರಗಳಿಗೆ ಬುದ್ಧಿ ಕೌಶಲ್ಯ ಒದಗಿಸಿ ಅಗತ್ಯ ಕೆಲಸ ಕಾರ್ಯಗಳನ್ನು ನಿರ್ವಹಿಸುವಂತೆ ಮಾಡುವ ಸೂಚನೆಗಳನ್ನು ತುಂಬಿಸಿರುವ ಕಂಪ್ಯುಟರಾಧಾರಿತ ಕಾರ್ಯಕ್ರಮಗಳು. ಅಂದ್ರೆ ವೇಗವಾಗಿ ವಿಷಯಗಳನ್ನು ಅರ್ಥಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಯಂತ್ರಸ್ವರೂಪಿ ಕಾರ್ಯಾಚರಣೆ. ಇದರ ಮಹತ್ವ ಇಂದು ಎಷ್ಟಕ್ಕೆ ಏರಿದೆ ಎಂದರೆ ಯಾವ ಕೆಲಸವನ್ನು ಆದರೂ ಸರಿ ಇದರ ಮೂಲಕ ಮಾಡಿಸಲು ಸಾಧ್ಯ ಎನ್ನುವ ಸ್ಥಿತಿ ಇದೆ. ಆದ್ರೆ ಎಐ ಎಂದೂ ಕರೆಯಲ್ಪಡುವ ಈ ಪದವನ್ನು ಕನ್ನಡ ಭಾಷೆಯಲ್ಲಿ ತಪ್ಪಾಗಿ ಬಳಸುತ್ತಿರುವದು ವ್ಯಾಪಕವಾಗಿದೆ. ಕೃತಕ ಬುದ್ಧಿಮತ್ತೆ ಸರಿಯಾದ ಮನೋವೈಜ್ಞಾನಿಕ ಸ್ವರೂಪದ ಪದವಲ್ಲ. ಏಕೆಂದರೆ ಬುದ್ಧಿಯ ಮತ್ತೆ ಬರುವದು ಬುದ್ದಿಶಕ್ತಿಯನ್ನು ಅಳತೆ ಮಾಡಿದಾಗ. ಅಂದ್ರೆ ಮಾನೀಕರಿಸಲಾದ ಬುದ್ಧಿ ಪರೀಕ್ಷೆಯೊಂದರಲ್ಲಿ ವ್ಯಕ್ತಿಯೊಬ್ಬರು ಪಡೆಯುವ ಅಂಕಗಳು.ಇದನ್ನು ಐಕ್ಯು ಎನ್ನುವದಾಗಿಯೂ ಗುರುತಿಸಲಾಗುತ್ತದೆ. ಆದರೆ ಎಲ್ಲಾ ಬುದ್ಧಿ ಪರೀಕ್ಷೆಗಳಲ್ಲಿಯೂ ಈ ನಮೂನೆಯ ಲೆಕ್ಕಾಚಾರದ ಮೂಲಕ ಸಿಗುವ ಭಾಗಲಬ್ಧ ಇರಲೇ ಬೇಕೆಂದಿಲ್ಲ. ಹೀಗಾಗಿ ಕೆಲವು ಬುದ್ಧಿಶಕ್ತಿಯ ಪರೀಕ್ಷೆಗಳು ಐಕ್ಯು ಮೂಲಕ ವ್ಯಕ್ತಿಯ ಬುದ್ಧಿಮಟ್ಟವನ್ನು ಸೂಚಿಸುತ್ತವೆ. ಇವುಗಳನ್ನು ಸಂಖ್ಯಾಶಾಸ್ತ್ರದ ಸೂತ್ರ ಮತ್ತು ಮಾದರಿಯ ಮೂಲಕ ಕಂಡುಕೊಳ್ಳಲಾಗುತ್ತದೆ. ಆದರೆ ಯಂತ್ರಗಳಲ್ಲಿ ಇರುವದು ವೇಗವಾಗಿ ತರ್ಕದ ಲೆಕ್ಕಾಚಾರದ ಸೂತ್ರ ಗಳ ಆನ್ವಯಿಕ ಶಕ್ತಿಯಿಂದ ಹೊರಬರುವಂತಹ ಫಲಿತಾಂಶ. ಲಕ್ಷಾಂತರ ಸಮಸ್ಯೆಗಳನ್ನು ನಿರ್ವಹಿಸುವ ಯಂತ್ರ ಶಕ್ತಿ, ಕೃತಕ ಬುದ್ಧಿಶಕ್ತಿ.
We use cookies to analyze website traffic and optimize your website experience. By accepting our use of cookies, your data will be aggregated with all other user data.