Meet SRIDHARA


ಜನಪ್ರಿಯ ಮನೋವಿಜ್ಞಾನದ ವಿಷಯಗಳನ್ನು ಸರಳ ಕನ್ನಡದ ಮೂಲಕ ಜನತೆಗೆ ಪರಿಚಯಿಸುವ ಸೇವೆಯನ್ನು ಹಲವಾರು ದಶಕಗಳಿಂದ ಮಾಡುತ್ತಾ ಬಂದಿರುವ ಮನೋವಿಜ್ಞಾನಿ ಅ.ಶ್ರೀಧರ ಕನ್ನಡ ಓದುಗರಿಗೆ ಅಷ್ಟಲ್ಲದೇ ಟಿವಿ ಸುದ್ದಿ ವಾಹಿನಿಗಳ ವೀಕ್ಷಕರಿಗೂ ತಿಳಿಸುವವರಾಗಿದ್ದಾರೆ. ಮನಸಿನ ಸೂಕ್ಷ್ಮ ಆಗುಹೋಗುಗಳು ಕಾಣಿಸದಿದ್ದರೂ ಅದರ ಪರಿಣಾಮ ಪ್ರಭಾವಗಳು ಇಡೀ ಸಮಾಜದ ಮೇಲೆ ಆಗುವಂತಹದ್ದು. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮನಸ್ಸು ಯಾವ ಕ್ಷಣಗಳಲ್ಲಿ ಯಾವ ದಿಕ್ಕಿನತ್ತ ಹೋಗುತ್ತದೆ ಎನ್ನುವುದನ್ನು ತಿಳಿಯಲಾರದ ಪೋಷಕ, ಶಿಕ್ಷಕರ ಸಂಖ್ಯೆಯೂ ಏರುತ್ತಿದೆ. ಇಂತಹದೊಂದು ಸಮಯದಲ್ಲಿ ವಿದ್ಯುನ್ಮಾನ ಮಾಧ್ಯಮಗಳಾದ ಮೊಬೈಲ್ ಫೋನ್, ಅಂತರ್ಜಾಲ, ಕಂಪ್ಯೂಟರ್ ಬಳಕೆ ಗೊಂದಲಗಳನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಇವೆಲ್ಲ ಮಕ್ಕಳ ಮನಸ್ಸಿಗೆ ಸುಲಭವಾಗಿ ಹಿಡಿಸುವಂತ ಸಲಕರಣಗಳು ಆಗಿರುವುದಂತೂ ನಿಜ. ಇದನ್ನು ಬಳಸಲು ಕಾತರರಾಗಿರುವ ಮಕ್ಕಳ ಮನಸ್ಸು ಕೆಲವೊಮ್ಮೆ ಎಡವುದರ ಸಾಧ್ಯತೆಗಳು ಇವೆ.

ಕುತೂಹಲವಾಗಿ ಆರಂಭವಾಗುವ ಚಟುವಟಿಕೆಗಳು, ಅಭ್ಯಾಸ, ಚಟಗಳಾಗಿರುವುದರ ಬಗ್ಗೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹದೊಂದು ಉಪಯುಕ್ತ ಮಾಹಿತಿಗಳನ್ನು ಟಿವಿ, ದಿನ ಮತ್ತು ವಾರ ಪತ್ರಿಕೆಗಳ ಅಂಕಣಗಳ ಮೂಲಕ ತಿಳಿಸುತ್ತಾ ಇರುವ ಅ.ಶ್ರೀಧರ ಅವರು ಗ್ರಂಥದ ಮೂಲಕ ಮಕ್ಕಳ ಮನಸ್ಸನ್ನು ಅರಿಯುವ ಕ್ರಮಗಳನ್ನು ಕನ್ನಡದ ಜನತೆಗೆ ಸಿಗುವಂತೆ ಮಾಡಿರುವುದು ಸಮಯೋಚಿತವಾಗಿರುವಾದದ್ದು. ಕನ್ನಡದ ಪೋಷಕರಿಗೆ ವಿದ್ಯುನ್ಮಾನ ಲೋಕವನ್ನು ಹೀಗೆ ಪರಿಚಯಿಸಿ ಕೊಡುತ್ತಿರುವುದು ಶ್ಲಾಘನೀಯ.